ರಾಗಂ: ಶ್ರೀ (ಮೇಳಕರ್ತ 22 ಖರಹರಪ್ರಿಯ ಜನ್ಯರಾಗ)
ಆರೋಹಣ: ಸ ರಿ2 ಮ1 ಪ ನಿ2 ಸ
ಅವರೋಹಣ: ಸ ನಿ2 ಪ ದ2 ನಿ2 ಪ ಮ1 ರಿ2 ಗ2 ರಿ2 ಸ
ತಾಳಂ: ಆದಿ
ರೂಪಕರ್ತ: ಪುರಂಧರ ದಾಸ
ಭಾಷಾ: ಕನ್ನಡ
ಪಲ್ಲವಿ
ಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ಶ್ರೀ ಸೌ (ಭಾಗ್ಯದಾ ಲಕ್ಷ್ಮೀ ಬಾರಮ್ಮಾ)
ಚರಣಂ 1
ಹೆಜ್ಜೆಯೆ ಮೇಲೊಂದ್ ಹೆಜ್ಜೆಯ ನಿಕ್ಕುತ (ಹೆಜ್ಜೆಯೆ ಮೇಲೇ ಹೆಜ್ಜೆ ನಿಕ್ಕುತ)
ಗಜ್ಜೆ ಕಾಲ್ಗಲಾ ಧ್ವನಿಯಾ ತೋರುತ (ಮಾಡುತ)
ಸಜ್ಜನ ಸಾಧೂ ಪೂಜೆಯೆ ವೇಳೆಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ॥
(ಭಾಗ್ಯದಾ)
ಚರಣಂ 2
ಕನಕಾವೃಷ್ಟಿಯ ಕರೆಯುತ ಬಾರೇ ಮನಕಾಮನೆಯಾ ಸಿದ್ಧಿಯ ತೋರೆ ।
ದಿನಕರಕೋಟೀ ತೇಜದಿ ಹೊಳೆಯುವ ಜನಕರಾಯನಾ ಕುಮಾರಿ ಬೇಗ ॥
(ಭಾಗ್ಯದಾ)
ಚರಣಂ 3
ಅತ್ತಿತ್ತಗಳದೆ ಭಕ್ತರ ಮನೆಯೊಳು ನಿತ್ಯ ಮಹೋತ್ಸವ ನಿತ್ಯ ಸುಮಂಗಲ ।
ಸತ್ಯವ ತೋರುತ ಸಾಧು ಸಜ್ಜನರ ಚಿತ್ತದಿ ಹೊಳೆಯುವ ಪುತ್ಥಳಿ ಬೊಂಬೆ ॥
(ಭಾಗ್ಯದಾ)
ಚರಣಂ 4
ಸಂಖ್ಯೇ ಇಲ್ಲದೇ ಭಾಗ್ಯವ ಕೊಟ್ಟು ಕಂಕಣ ಕಯ್ಯಾ ತಿರುವುತ ಬಾರೇ ।
ಕುಂಕುಮಾಂಕಿತೇ ಪಂಕಜ ಲೋಚನೆ ವೇಂಕಟ ರಮಣನ ಬಿಂಕದರಾಣೀ ॥
(ಭಾಗ್ಯದಾ)
ಚರಣಂ 5
ಚಕ್ಕೆರ ತುಪ್ಪದ ಕಾಲುವೆಹರಿಸಿ ಶುಕ್ರ ವಾರದಾ ಪೂಜಯೆ ವೇಳೆಗೆ ।
ಅಕ್ಕೆರಯುನ್ನ ಅಳಗಿರಿ ರಂಗ ಚೊಕ್ಕ ಪುರಂದರ ವಿಠನ ರಾಣೀ ॥
(ಭಾಗ್ಯದಾ)
ಭಾಗ್ಯದಾ ಲಕ್ಷ್ಮೀ ಬಾರಮ್ಮಾDownload PDF
Related Posts
ಪದ್ಮಾವತೀ ಸ್ತೋತ್ರಂ
ವಿಷ್ಣುಪತ್ನಿ ಜಗನ್ಮಾತಃ ವಿಷ್ಣುವಕ್ಷಸ್ಥಲಸ್ಥಿತೇ ।ಪದ್ಮಾಸನೇ ಪದ್ಮಹಸ್ತೇ ಪದ್ಮಾವತಿ ನಮೋಽಸ್ತು ತೇ ॥ 1 ॥ ವೇಂಕಟೇಶಪ್ರಿಯೇ ಪೂಜ್ಯೇ ಕ್ಷೀರಾಬ್ದಿತನಯೇ ಶುಭೇ ।ಪದ್ಮೇರಮೇ ಲೋಕಮಾತಃ ಪದ್ಮಾವತಿ ನಮೋಽಸ್ತು ತೇ ॥ 2 ॥ ಕಳ್ಯಾಣೀ ಕಮಲೇ ಕಾಂತೇ ಕಳ್ಯಾಣಪುರನಾಯಿಕೇ ।ಕಾರುಣ್ಯಕಲ್ಪಲತಿಕೇ ಪದ್ಮಾವತಿ ನಮೋಽಸ್ತು…
Read moreಶ್ರೀ ವ್ಯೂಹ ಲಕ್ಷ್ಮೀ ಮಂತ್ರಂ
ವ್ಯೂಹಲಕ್ಷ್ಮೀ ತಂತ್ರಃದಯಾಲೋಲ ತರಂಗಾಕ್ಷೀ ಪೂರ್ಣಚಂದ್ರ ನಿಭಾನನಾ ।ಜನನೀ ಸರ್ವಲೋಕಾನಾಂ ಮಹಾಲಕ್ಷ್ಮೀಃ ಹರಿಪ್ರಿಯಾ ॥ 1 ॥ ಸರ್ವಪಾಪ ಹರಾಸೈವ ಪ್ರಾರಬ್ಧಸ್ಯಾಪಿ ಕರ್ಮಣಃ ।ಸಂಹೃತೌ ತು ಕ್ಷಮಾಸೈವ ಸರ್ವ ಸಂಪತ್ಪ್ರದಾಯಿನೀ ॥ 2 ॥ ತಸ್ಯಾ ವ್ಯೂಹ ಪ್ರಭೇದಾಸ್ತು ಲಕ್ಷೀಃ ಸರ್ವಪಾಪ ಪ್ರಣಾಶಿನೀ…
Read more